ಚಾಂದ್ರ ದಿನ ಜುಲೈ 21. ಇದಕ್ಕೆ ಸಂಬಂದಿಸಿದ ಪ್ರಶ್ನೋತ್ತರಗಳು
1.ಸೂಪರ್ ಮೂನ್ ಎಂದರೆ ಏನು
-ಚಂದ್ರನು ಭೂಮಿಗೆ ಹತ್ತಿರ ಬರುವ ದಿನ
2.ಮೊತ್ತ ಮೊದಲ ಕೃತಕ ಉಪಗ್ರಹ
-ಸ್ಫುಟ್ನಿಕ್ 1
3.ಭಾರತದ ಮೊದಲ ಕೃತಕ ಉಪಗ್ರಹ
-ಆರ್ಯಭಟ
4.ಚಂದ್ರನಲ್ಲಿ ಕಾಲಿರಿಸಲು ಮನುಷ್ಯನಿಗೆ ಸಹಾಯ ಮಾಡಿದ ಮೊದಲ ಬಾಹ್ಯಾಕಾಶ ನೌಕೆ
-ಅಪೋಲೋ 11
5.ವಿದ್ಯಾಭ್ಯಾಸ ಅಗತ್ಯಗಳಿಗೆ ಭಾರತ ಉಡಾಯಿಸಿದ ಉಪಗ್ರಹ
-ಎಜುಸಾಟ್
6.ಸಾಗರ ಸಂಶೋಧನೆಗಳಿಗೆ ಭಾರತ-ಫ್ರಾನ್ಸ್ ಜಂಟಿ ಯೋಜನೆ
-ಸರಳ್
7.ಸ್ಫೋಟದ ಮೂಲಕ ನಾಶವಾಗುವ ನಕ್ಷತ್ರದ ಹೆಸರು
-ಸೂಪರ್ ನೋವಾ
8.ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಶನ್ ಕೆಲಸಗಳನ್ನು ನಿಯಂತ್ರಿಸುವ ಏಜೆನ್ಸಿ
-ನಾಸಾ
9.ಚಂದ್ರನ ಮೇಲ್ಮೈಯಲ್ಲಿ ಕಾಣಸಿಗುವ ಮೂಲವಸ್ತು
-ಟೈಟಾನಿಯಂ
10.ಸೂರ್ಯನಿಗೆ ಹತ್ತಿರದ ಗ್ರಹ
-ಬುಧ
11.ಭೌಮ ದಿನ ಯಾವಾಗ ಆಚರಿಸಲಾಗುತ್ತದೆ
-ಎಪ್ರಿಲ್ 22
12.ಚಂದ್ರನಿಂದ ಬೆಳಕು ಬೂಮಿಗೆ ತಲುಪಲು ತೆಗೆದುಕೊಳ್ಳುವ ಸಮಯ
-1.3ಸೆಕೆಂಡ್
13.ದೂರದರ್ಶಕ ಉಪಯೋಗಿಸಿ ಮೊದಲಬಾರಿಗೆ ಪ್ರಪಂಚ ನಿರೀಕ್ಷಿಸಿದ ವಿಜ್ಞಾನಿ
-ಗೆಲಿಲಿಯೋ
14.ಫಸ್ಟ್ ಮೆನ್ ಆನ್ ಮೂನ್ ಕೃತಿಯ ಲೇಖಕ
-ಎಚ್ ಜಿ ವೇಲ್ಸ್
15.ಆಧುನಿಕ ಖಗೋಳ ಶಾಸ್ತ್ರದ ಪಿತಾಮಹ
-ಕೋಪರ್ನಿಕಸ್
16.ಚಂದ್ರನಿಂದ ನೋಡಿದಾಗ ನೋಡಬಹುದಾದ ಭೂಮಿಯ ಮಾನವನಿರ್ಮಿತ ವಸ್ತು
-ಚೀನಾದ ಮಹಾಗೋಡೆ
17.ಭಾರತದ ಮೊದಲ ರಾಕೆಡ್ ಉಡ್ಡಯನ ಕೇಂದ್ರ
-ತುಂಬಾ
18.ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಪ್ರಥಮ ರೂಪರೇಖೆ ತಯಾರಿಸಿದ ವಿಜ್ಞಾನಿ
-ಡಾ.ಜಹಾಂಗೀರ್ ಬಾಬ
19.ಒಬ್ಬ ಮಾನವನ ಪುಟ್ಟ ಹೆಜ್ಜೆ, ಮನುಕುಲದ ರಾಕ್ಷಸ ನೆಗೆತ ಎಂದವರಾರು
-ನೀಲ್ ಆರ್ಮ್ ಸ್ಟ್ರಾಂಗ್
20.ಹೆಚ್ಚಿನ ದೇಶಗಳ ಸಹಾಯದೊಂದಿಗೆ ಸ್ಥಾಪಿಸಲಾದ ಬಾಹ್ಯಾಕಾಶ ನಿಲಯ
-ಇಂಟರ್ ನ್ಯಾಶನಲ್ ಸ್ಪೇಸ್ ಸ್ಟೇಷನ್
21.ಚಂದ್ರನಲ್ಲಿ ಅತ್ಯಂತ ಹೆಚ್ಚು ಆಳ ಇರುವ ಗುಳಿ
-ನ್ಯೂಟನ್ ಗುಳಿ
22.ಮೊದಲ ಚಾಂದ್ರಯಾತ್ರಿಕರು ಚಂದ್ರನಲ್ಲಿ ಇಳಿದ ಜಾಗದ ಹೆಸರು
-ಪ್ರಶಾಂತ ಸಮುದ್ರ
23.ಚಂದ್ರನಲ್ಲಿ ಹೆಚ್ಚು ಎತ್ತರದ ಪರ್ವತ
-ಮೌಂಟ್ ಹೈಜೀನ್ಸ್
24.ಭಾರತದ ಉಪಗ್ರಹ ವಾರ್ತಾ ವಿನಿಮಯ ಭೂನಿಲಯ
-ವಿಕ್ರಂ ಸ್ಟೇಶನ್
25.ಯಾವ ವಾಹನದಲ್ಲಿ ಲೈಕ ಎಂಬ ನಾಯಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಿದರು
-ಸ್ಫುಟ್ನಿಕ್ 2
26.ಚಂದ್ರನು ಒಂದು ವರ್ಷದಲ್ಲಿ ಎಷ್ಟು ಸಲ ಭೂಮಿಗೆ ಸುತ್ತು ಬರುವುದು
-13ಸಲ
27.ಸೂರ್ಯನಿಂದ ಬೆಳಕು ಭೂಮಿಗೆ ತಲುಪಲು ತೆಗೆದುಕೊಳ್ಳುವ ಸಮಯ
-8.2 ನಿಮಿಷ
28.ಹ್ಯಾಲಿ ಧೂಮಕೇತು ಕೊನೆಗೆ ಪ್ರತ್ಯಕ್ಷವಾದ ವರ್ಷ
-1986
29.ರಾಕೆಟ್ ಉಡಾವಣಾ ಕೇಂದ್ರವಾದ ಶ್ರೀಹರಿಕೋಟ ಯಾವ ರಾಜ್ಯದಲ್ಲಿದೆ
-ಆಂದ್ರಪ್ರದೇಶ
30.ಸುನಾಮಿಗೆ ಕಾರಣ
-ಸಮುದ್ರದಲ್ಲಿ ಉಂಟಾಗುವ ಭೂಕಂಪ
31.ವಿಮಾನದ ಬ್ಲೇಕ್ ಬಾಕ್ಸ್ ನ ಬಣ್ಣ
-ಕಿತ್ತಳೆ
32.ಭಾರತದ ಮಂಗಳ ಸಂಶೋಧನ ಯೋಜನೆ
-ಮಂಗಳಯಾನ್
33.ಇನ್ಸಾಟ್ ನ ಪೂರ್ಣರೂಪ
-ಇಂಡಿಯನ್ ನಾಶನಲ್ ಸಾಟಲೈಟ್
34.ಚಂದ್ರನ ಆಕಾಶದ ಬಣ್ಣ
-ಕಪ್ಪು
35.ಟೈಟನ್ ಯಾವ ಗ್ರಹದ ಉಪಗ್ರಹ
-ಶನಿ
36.ಬೆಳಗಿನ ನಕ್ಷತ್ರ(ಮುಂಜಾನೆಯ ನಕ್ಷತ್ರ)
-ಶುಕ್ರ
37.ಭೂಮಿಗೆ ಅತ್ಯಂತ ಹತ್ತಿರದ ನಕ್ಷತ್ರ
-ಸೂರ್ಯ
38.ಕೂಡಂಕುಳಂ ಅಣುಸ್ಥಾವರ ಯೋಜನೆಗೆ ಸಹಕರಿಸುವ ದೇಶ
-ರಷ್ಯ
39.ಭಾರತದ ಹವಾಮಾನ ಉಪಗ್ರಹ
-ಕಲ್ಪನ 1
40.ಭಾರತದ ಮೊದಲ ಅಣು ರಿಯಾಕ್ಟರ್
-ಅಪ್ಸರ
41.ಗುರುಗ್ರಹಕ್ಕೆ ಅಪ್ಪಳಿಸಿದ ಧೂಮಕೇತು
-ಶೂಮೇಕರ್ ಲೆವಿ 9
42.ಸೂರ್ಯನಲ್ಲಿ ಉಷ್ಣ ಮತ್ತು ಬೆಳಕು ಉತ್ಪಾದಿಸಲ್ಪಡುವ ಕ್ರಿಯೆ
-ನ್ಯೂಕ್ಲಿಯರ್ ಫ್ಯೂಷನ್
43.ಮಂಗಳದ ಅಗ್ನಿಪರ್ವತಗಳಲ್ಲಿ ದೊಡ್ಡದು
-ಒಲಿಂಪಸ್ ಮೋನ್ಸ್
44.ಧೂಮಕೇತುವಿನ ಬಾಲವಾಗಿ ಗೋಚರವಾಗುವುದು
-ಧೂಳಿನ ಮೊಡಗಳು
45.ಬಾಹ್ಯಾಕಾಶಕ್ಕೆ ತಲುಪಿದ ಸಂಚಾರಿಗಳು ಆಶಯವಿನಿಮಯ ನಡೆಸುವ ರೀತಿ
-ರೇಡಿಯೋ ಸಂದೇಶಗಳ ಮೂಲಕ
46.ಬಾಹ್ಯಾಕಾಶ ಪರ್ಯಟನೆ ನಡೆಸಿದ ಅತ್ಯಂತ ಹೆಚ್ಚು ವಯಸ್ಸಿನ ಮನುಷ್ಯ
-ಜೋನ್ ಗ್ಲೇನ್ – 77 ವಯಸ್ಸು
47.ಭಾರತದ ಮೊದಲ ಹವಾಮಾನ ಉಪಗ್ರಹ
-ಕಲ್ಪನ 1
48.ಭಾರತದ ಭೂಪಟ ನಿರ್ಮಾಣ ಚಟುವಟಿಕೆಗಳಿಗಿರುವ ಉಪಗ್ರಹ
-ಕಾರ್ಟೋಸ್ಯಾಟ್ 1
49.ಮೊದಲ ಭಾರತೀಯ ಬಾಹ್ಯಾಕಾಶ ಯಾತ್ರಿಕ ರಾಕೇಶ ಶರ್ಮ ಬಾಹ್ಯಾಕಾಶಕ್ಕೆ ಸಂಚರಿಸಿದ ವಾಹನ
- ಸೋಯೂಸ್ ಟಿ 11
50.ಕೊನೆಯದಾಗಿ ಚಂದ್ರನಲ್ಲಿ ಇಳಿದ ವರ್ಷ
-1972 ಡಿಸೆಂಬರ್ 12
51.ಶ್ರೀಹರಿಕೋಟೆಯಿಂದ ಉಡಾಯಿಸಿದ ಮೊದಲ ಕೃತಕ ಉಪಗ್ರಹ ಯಾವುದು
-ರೋಹಿಣಿ 1
52.ನಕ್ಷತ್ರಗಳಿಗಿರುವ ದೂರವನ್ನು ಅಳೆಯುವ ಮಾನ ಯಾವುದು
-ಜ್ಯೋತಿರ್ ವರ್ಷ
53.ಇಂಡಿಯನ್ ಬಾಲಿಸ್ಟಿಕ್ ಮಿಸೈಲ್ ಆದ ಅಗ್ನಿಯ ಹಿಂದೆ ಕೆಲಸ ಮಾಡಿದ ವಿಜ್ಞಾನಿ ಯಾರು
-ಡಾ.ಎಪಿಜೆ ಅಬ್ದುಲ್ ಕಲಾಂ.